Somanna Machimada resigns from Etv News Kannada ( News 18 Kannada)
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿರುವ ಈ ಸಮಯದಲ್ಲೇ ಕನ್ನಡದ ಟಿವಿ ವಾಹಿನಿಗಳ ನಡುವೆ ಪತ್ರಕರ್ತರ ‘ವಲಸೆ’ ಆರಂಭವಾಗಿದೆ. ಈ ಸಾಲಿಗೆ ಹೊಸದಾಗಿ ಸೇರ್ಪಡೆಯಾಗಿರಿವುದು ಸೋಮಣ್ಣ ಮಾಚಿಮಾಡ .
ಸದ್ಯ ನೆಟ್ವರ್ಕ್ ೧೮ ಒಡೆತನದ ಈಟಿವಿ ನ್ಯೂಸ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ . ಇದನ್ನು ಸ್ವತಃ ಅವರೇ ತಮ್ಮ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ .
"'ಈ' ಪಯಣ ಮುಗಿದಿದೆ. 'ಆ' ದಾರಿ ಕಾದಿದೆ. ಹೋಗಿ ಬರುವೆ, ಹರಸಿ ಕಳಿಸಿ..! - ಸದ್ಯ, ರಾಜೀನಾಮೆ ನೀಡಿದ್ದೇನೆ. ಮುಂದೇನು....? ಶೀಘ್ರದಲ್ಲೇ ಹೇಳುವೆ. ಧನ್ಯವಾದಗಳು " ಎಂದು ಹಂಚಿಕೊಂಡಿದ್ದಾರೆ .
ಸದ್ಯ ಕನ್ನಡದಲ್ಲಿ ಹದಿಮೂರು ಸುದ್ದಿವಾಹಿನಿಗಳು ಕಾರ್ಯನಿರ್ವಹಿಸುತ್ತಿದ್ದು , ಮುಂದಿನ ದಿನಗಳಲ್ಲಿ ಇದರ ಸಂಖ್ಯೆ ಹದಿನೆಂಟಕ್ಕೆ ಏರಲಿದೆ . ಫೋಕಸ್ ಟಿವಿ ಕನ್ನಡ, ಟಿವಿ 5 ಕನ್ನಡ, ಟಿವಿ 1 ಹೊಸದಾಗಿ ಸೇರ್ಪಡೆಯಾಗಲಿರುವ ಸುದ್ದಿ ವಾಹಿನಿಗಳು
English Description : Somanna Machimada resigns from Etv News Kannada ( News 18 Kannada)

COMMENTS